DBIM Home 1 (KN)
ಪ್ರಕಟಣೆಗಳು
ಜಿಲ್ಲೆಯ ಬಗ್ಗೆ
ಶಿವಮೊಗ್ಗ ದಟ್ಟವಾದ ಕಾಡು, ಗುಡ್ಡಗಳಿಂದ ಮತ್ತು ವೈಭವದಿಂದ ಅವ್ಯಾಹತವಾಗಿ ಧುಮುಕುವ ಜಲಪಾತಗಳಿಂದ ಆವೃತ್ತಗೊಂಡಿದ್ದು ನೋಡುವ ಕಣ್ಣಿಗೆ ಒಂದು ನಿಜವಾದ ಪ್ರಕೃತಿಯ ಚಿತ್ರವನ್ನಾಗಿ ಮೂಡಿಸುತ್ತದೆ. ಬಹುಪಾಲು ಪ್ರದೇಶವು ಹಚ್ಚ ಹಸಿರಿನ ಭತ್ತದ ತೆನೆಗಳು ಗಾಳಿಯಲ್ಲಿ ತೂಗಾಡುವ ದೃಶ್ಯವು ಆ ಜಾಗವನ್ನು ಒಂದು ಚಿತ್ರಸದೃಶ್ಯ ಪ್ರದೇಶವನ್ನಾಗಿ ಮೂಡಿಸುತ್ತದೆ.
ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ ಮತ್ತು ಶಿವಮೊಗ್ಗ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು ಕರ್ನಾಟಕದ ಅಕ್ಕಿಯ ಕಣಜಎಂಬ ಹಿರಿಮೆಯನ್ನು ಪಡೆದಿದೆ. ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಆದ ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ವರದ ನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿದೆ. ಶಿವಮೊಗ್ಗ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಇದ್ದಿತು. ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು. ಹೊಯ್ಸಳರು ಮತ್ತು ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು 16ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ ಮತ್ತು ಶಿವಮೊಗ್ಗ ಎಂಬ ಹೆಸರು ‘ಶಿವ-ಮುಖ’, ಎಂಬ ಪದಪುಂಜದಿಂದ ಬಂದದ್ದು. ಇದನ್ನು ನಾಮಕರಿಸಿದವರು ಕೆಳದಿ ನಾಯಕರು. ಶಿವಮೊಗ್ಗ ತನ್ನ ಪರಾಕಾಷ್ಠೆಯನ್ನು ಕ್ರಿ.ಶ.1600ರಲ್ಲಿ ಶಿವಪ್ಪನಾಯಕರ ಆಳ್ವಿಕೆಯಲ್ಲಿ ಪಡೆದುಕೊಂಡಿತು.
ಜಿಲ್ಲೆಯ ಅನ್ವೇಷಣೆ
ಸಹ್ಯಾದ್ರಿ ವ್ಯಾಪ್ತಿಯಲ್ಲಿ ಘಟ್ಟಗಳ ಭಾಗದಲ್ಲಿ ವರ್ಷ ಪೂರ್ತಿ ನದಿಗಳು ಹರಿಯುತ್ತಿರುತ್ತವೆ ಮತ್ತು ಫಲವತ್ತಾದ ಮೆಕ್ಕಲು ಮಣ್ಣನ್ನು ಆವರಿಸಿಕೊಂಡಿದೆ. ಈ ಸ್ವರೂಪದ ಪ್ರಕೃತಿಯ ಆಶೀರ್ವಾದದಿಂದ ಶಿವಮೊಗ್ಗ ಕರ್ನಾಟಕದ ಆಹಾರ ತೊಟ್ಟಿಲು ಎಂದು ಹೆಸರಾಗಿದೆ.
ಇತ್ತೀಚಿನ ಅಪ್ ಡೇಟ್ ಗಳು ಮತ್ತು ಮಾಹಿತಿ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ
ಸಹಾಯವಾಣಿ
-
ಪೊಲೀಸ್ ನಿಯಂತ್ರಣ ಕೊಠಡಿ : 100 / 112
-
ಆಂಬ್ಯುಲೆನ್ಸ್ : 108
-
ಅಗ್ನಿಶಾಮಕ ದಳ : 101
-
ಮಹಿಳಾ ಸಹಾಯವಾಣಿ : 1091
-
ಮಕ್ಕಳ ಸಹಾಯವಾಣಿ: 1098
-
ರಕ್ತ ನಿಧಿ : 1070
ನಾಗರಿಕ ಸೇವೆಗಳು
ನಮ್ಮ ಶಿವಮೊಗ್ಗ ಗ್ಯಾಲರಿ
ಬಳ್ಳಿಗಾವಿ
ಇಕ್ಕೇರಿ
ಬಂದಳಿಕೆ
ಹುಂಚ
ಚಂದ್ರಗುತ್ತಿ
ಗುಡವಿ
ಕುಬಟೂರು
ಚರ್ಚ್, ಶಿವಮೊಗ್ಗ
ನಗರ ಕೋಟೆ
ಆನೆ ಬಿಡಾರ, ಸಕ್ಕರೆಬೈಲು
ಜೋಗ ಜಲಪಾತ
ಅಚ್ಚಕನ್ನೇ ಜಲಪಾತ
ಕುಂದಾದ್ರಿ

